Homeನಿರವಯವ
ನಿರವಯವ
ನಿರವಯವ
Standard shipping in 4 working days

ನಿರವಯವ

₹125
₹113
Saving ₹12
10% off
Product Description

weggs ಇವಲ್ಲಿ ಪಕ್ಕಾ ಬಾಲಿವುಡ್ ಮಸಾಲಾದ ಹಾಗೇ ಜರುಗಿತೆನ್ನಬೇಕು. ಅಂತಹ ಚಮಕ್ಕುಗಳ ಸರಣಿ... ಹಾಗಂತ ಬರೇ ಬಂಡಲ್ಲೆಂದು ಬದಿಗೊತ್ತಿದರೆ ಅಥವಾ ಇಂಥದೂ ಒಂದು ಕಥೆಯಾಗಬಹುದೆಂಬ ಉಮೇದೂ ಆಗದಿದ್ದರೆ ನವಿರುವುದು ನನ್ನ ಕಥನದಲ್ಲಷ್ಟೇ ಅಂದುಕೊಂಡು ಬದಿಗಿಡಿ. ನನಗೆ ರೆಟರಿಕ್ಕುಗಳನ್ನು ಕಳಚಿ - ಬಿಚ್ಚಿದ ಗೌರಮ್ಮಗಳ ಹಾಗೆ ನಿರಾಡಂಬರವಾಗಿ ಏನನ್ನೂ ಹೇಳಲಾಗುವುದಿಲ್ಲ, ಮದನಿಕೆಯರಿರದ ಬೇಲೂರು ಗೋಡೆಗಳಿಗೆ ಅರ್ಥವಲ್ಲಿ ತಾನೇ ಒಲಿದೀತು? ಹಾಗಂತ ಇದೇ ನನ್ನ ದೌರ್ಬಲ್ಯವೂ ಇರಬಹುದು. ಆದರೂ ಒಂದು ಪ್ರಶ್ನೆ - ಕತೆಯೆಂದರೆ ಪಕ್ಕಾ ಕತೆಯಷ್ಟೆಯೇ...? ಅಥವಾ ಅದರ ಆನ್ನೋಣಗಳ ರೀತಿಯೆ? ಅಲ್ಲದೆ ಅದರೊಟ್ಟಿಗೆ ಹೊಸೆದುಕೊಂಡಿರುವ ರೆಟರಿಕುಗಳೆ? ಸಿಮಿಲಿ, ಮೆಟಫರುಗಳೆ? ಇನ್ನೇನೋ ಹಾಳುಮೂಳೇ? ಇದು ಸದಾ ನನ್ನನ್ನು ಕಾಡುವ ಪ್ರಶ್ನೆ... ನನಗಂತೂ ನವಿಲೆಂದರೆ ಗರಿಯೆ. ಆದರೊಟ್ಟಿಗೆ ಸಾವಿರ ಸಾವಿರ ಬೊಟ್ಟುಗಳ ಕಣ್ಣು, ಚಿಟ್ಟೆಯೆಂದರೆ ರೆಕ್ಕೆಗಳ ಫಡಫಡ. ಜತೆಗೆ ಬಣ್ಣದ ಬಣ್ಣದ ಥರಾವರೀ ಕುಸುರಿ, ಹಾಗೇ ಕತೆಯೆಂದರೆ ಕತೆಯಷ್ಟೇ ಅಲ್ಲ...

Share

Secure Payments

Shipping in India

Great Value & Quality
Create your own online store for free.
Sign Up Now