Homeಸಾವೆಂಬ ಲಹರಿ
ಸಾವೆಂಬ ಲಹರಿ
ಸಾವೆಂಬ ಲಹರಿ
Standard shipping in 4 working days

ಸಾವೆಂಬ ಲಹರಿ

₹110
₹99
Saving ₹11
10% off
Product Description
ಪ್ರಸ್ತುತ ಪ್ರಬಂಧ ಸಂಕಲನದಲ್ಲಿ ರೋಗಿಗಳ ಜತೆಗಿನ ಒಡನಾಟದ ವಿಶಿವಾನುಭವಗಳು ಕಥನಗೊಂಡಿವೆ. ಇಲ್ಲಿರುವ ಬೇರೆಬೇರೆ ದೇಶದ ಮತ್ತು ಸಮಾಜದ ರೋಗಿಗಳ ಜತೆಗಿನ ಅನುಭವಗಳು ಸ್ವಾರಸ್ಯಕರವಾಗಿವೆ. ಮನುಷ್ಯ ಸ್ವಭಾವದ ವೈಚಿತ್ರ್ಯ-ವಿಕ್ಷಿಪಣೆಗಳನ್ನು ತಾತ್ವಿಕ ಮತ್ತು ವಿನೋದ ದೃಷ್ಟಿಯಿಂದ ಅವಲೋಕಿಸುವ ಸೂಕ್ಷ್ಮಗುಣವೊಂದು ಕಾಗಿನೆಲೆಯವರಲ್ಲಿದೆ. ರೋಗಿಗಳ ಮತ್ತು ರೋಗಿಬಂಧುಗಳ ವರ್ತನೆಗಳ ಹಿಂದೆ ಕೇವಲ ದೇಹ ಮತ್ತು ಮನಸ್ಸುಗಳ ಮಾತ್ರವಲ್ಲ ಅವರ ಸಮಾಜ, ಆಲೋಚನ ಕ್ರಮ, ಸಂಸ್ಕೃತಿ, ನಾಗರಿಕತೆಗಳೂ ಇರುತ್ತವೆ ಎಂಬ ಗ್ರಹಿಕೆ ಇಲ್ಲಿದೆ. ಇದಕ್ಕೆ ಕಾರಣ, ಲೇಖಕರು ಹಲವು ಜಾತಿಧರ್ಮಗಳುಳ್ಳ ಭಾರತದಲ್ಲಿ ಹುಟ್ಟಿ ಬೆಳೆದಿರುವುದು; ಹಲವಾರು ದೇಶ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ವಲಸೆ ಬಂದು ನೆಲೆಸಿರುವ ಸಮುದಾಯಗಳುಳ್ಳ ಅಮೆರಿಕೆಯಲ್ಲಿ ವೈದ್ಯರಾಗಿರುವುದು. ಎಂತಲೇ, ದೇಶಗಳನ್ನೂ ಮತ್ತು ಅಲ್ಲಿನ ಸಮಾಜಗಳನ್ನೂ ಏಕರೂಪಿಯಾಗಿ ಗ್ರಹಿಸುವ ಜನಪ್ರಿಯ ಗ್ರಹಿಕೆಯನ್ನು ಪ್ರಬಂಧಗಳು ಭಗ್ನಗೊಳಿಸುತ್ತವೆ. ಅಮೆರಿಕದ ಮೂಲಕ ಭಾರತವನ್ನೂ ಭಾರತದ ಮೂಲಕ ಅಮೆರಿಕವನ್ನೂ ಮುಖಾಮುಖಿಯಾಗಿಸಿ ನೋಡುವ ಚೌಕಟ್ಟೋಂದು ಇಲ್ಲಿದೆ. ಇದುವೇ ಪ್ರಬಂಧಗಳನ್ನು ಸಂಸ್ಕೃತಿ ಚಿಂತನೆಯನ್ನಾಗಿಸಿದೆ. ಜಾಗತಿಕ ಎನ್ನಬಹುದಾದ ಅನುಭವಲೋಕವನ್ನು ಹುಟ್ಟಿ ಬೆಳೆದ ಸ್ಥಳೀಯ ಸಮಾಜದ ಅನುಭವಗಳೊಂದಿಗೆ ಬೆರೆಸಿ ಮತು ತೂಗಿ ನೋಡುವ ಇಲ್ಲಿನ ನೋಟಕ್ರಮವು ಇದಕ್ಕೆ ಇಂಬಾಗಿದೆ. ರಹಮತ್ ತರೀಕೆ
Share

Secure Payments

Shipping in India

Great Value & Quality
Create your own online store for free.
Sign Up Now