Homeಡುಮಿಂಗ
ಡುಮಿಂಗ
ಡುಮಿಂಗ
Standard shipping in 4 working days

ಡುಮಿಂಗ

₹90
₹81
Saving ₹9
10% off
Product Description
ಈ ಕತೆಗಳನ್ನು ಬರೆಯುವ ಮುಖೇನ ಈ ಜೀವಿಗಳಿಗೆ ತಾನು ನ್ಯಾಯ ಕೊಡಿಸುವೆನೆಂಬ ಹಮ್ಮು ಶಶಿಯವರ ಕತೆಗಳಲ್ಲಿ ಕನಿಷ್ಠ ಆ ಲೋಕದಲ್ಲಿ ಬದಲಾವಣೆಯ ಸಾಧ್ಯತೆ ಇದೆ ಎನ್ನುವ ಸೋಗಿನೊಂದು ಉಪಸಂಹಾರದ ಸಾಲನ್ನೂ ಕತೆಗಾರನು ಆ ವಾತ್ರಗಳಿಗೆ ಸೂಚಿಸುವುದಿಲ್ಲ. ಇಂತಹ ಬದುಕುಗಳನ್ನು ಓದುಗರ ಮುಖಕ್ಕೆ ಹಿಡಿದು ಅವರ ಆತ್ಮಗಳನ್ನು ಕೋರ್ಟ್‌ ಮಾರ್ಷಲಿಗೊಳಪಡಿಸುವ ಅಹಂಭಾವವೂ ಇಲ್ಲಿಲ್ಲ, ಅಥವಾ ನಿರ್ಲಿಪ್ರದ ಹೆಸರಿನಡಿ ಆ ಬದುಕುಗಳನ್ನು ತಮಾಷೆಯಾಗಿ ನೋಡುವ ಕಣ್ ದೃಷ್ಟಿಯನ್ನೂಭಾಷಾಸೃಷ್ಟಿಯನ್ನೂ ಅವರು ಅಪೇಕ್ಷಿಸುತ್ತಿಲ್ಲ. ಇದು ಹೀಗಿದೆ ಎನ್ನುವ ವರದಿಗಾರತ್ವದ ಚಪ್ಪಟೆತನದಿಂದ ಪಾರಾಗುವ ಚಾಣೈಯೂ ಅವರಿಗಿದೆ. ಈ ವಿಕ್ಷಿಪ್ತ ಮನೋಭಾವಗಳಿಗೆ ಕಾರಣವಾದ ಪಾತ್ರಗಳ ಗತದಲ್ಲೂ ಅವರು ಪಕ್ಷ ಸಾಧಿಸುವುದಿಲ್ಲ. ಎಲ್ಲಾ ಪಾರ್ಶ್ವಗಳನ್ನು ತೆರೆದಿಡುವ ವಿವರಣಾತ್ಮಕ ಶೈಲಿಗೆ ತಾವೇ ಬಹಿಷ್ಕಾರ ಘೋಷಿಸಿಕೊಂಡಿದ್ದಾರೆ. ಬಹಳ ಯೋಚಿಸಿಯೇ ಬರೆದ ಕತೆಗಳಿವು. ಎಲ್ಲರೂ ಯೋಚಿಸಿಯೇ ಬರೆಯುವುದು, ಆದರೆ ಬಹಳ ಸಲ ಆ ಪ್ರಜಾ ಬಳಕೆಯ ಕ್ಷೇತ್ರಕಾರ್ಯವೇನಿದೆ ಅದು ಕತೆಗಳಲ್ಲಿ ಮುನ್ನೆಲೆಗೆ ಬಂದುಬಿಡುವ ಮುಠಾಳತನವನ್ನು ನಿವಾರಿಸಿಕೊಳ್ಳಲು ಸೋಲುತ್ತೇವೆ. ಶಶಿ ತರೀಕೆರೆ ಗೆದ್ದಿದ್ದಾರೆ.
Share

Secure Payments

Shipping in India

Great Value & Quality
Create your own online store for free.
Sign Up Now