Homeಅರೆಶತಮಾನದ ಮೌನ
ಅರೆಶತಮಾನದ ಮೌನ
ಅರೆಶತಮಾನದ ಮೌನ
Standard shipping in 4 working days

ಅರೆಶತಮಾನದ ಮೌನ

₹190
₹171
Saving ₹19
10% off
Product Description
ಈಚೆಗೆ ನಾನು ಓದಿದ ಅಂತಃಕರಣ ಕಲಕುವ ಬರೆಹವಿದು, ಎರಡನೇ ಮಹಾಯುದ್ಧದಲ್ಲಿ ಜಪಾನಿ ಸೈನಿಕರ ಲೈಂಗಿಕದಾಸ್ಯಕ್ಕೆ ತಳ್ಳಲ್ಪಟ್ಟ ಡಚ್ ಮಹಿಳೆಯೊಬ್ಬಳು, ಲೋಕಕ್ಕಂಜಿ ತನ್ನೆದೆಯಲ್ಲಿ ಅಡಗಿಸಿಕೊಂಡಿದ್ದ ಅಪಮಾನ ನೋವು ಹಿಂಸೆಯ ಲಾವರಸದಂತಹ ದಾರುಣ ಅನುಭವವನ್ನು ಅರ್ಧ ಶತಮಾನದ ಬಳಿಕ ಬಿಚ್ಚಿಡುತ್ತಾಳೆ. ಯುದ್ದದಲ್ಲಿ ಗೆದ್ದವರು ಲೂಟಿ ಮಾಡುವುದು ಮತ್ತು ಸೆರೆಸಿಕ್ಕ ಸ್ತ್ರೀಯರನ್ನು ಡಿ ಲೈರಿಗಿಕವಾಗಿ ದುರ್ಬಳಕೆ ಮಾಡುವುದು ಜಗತ್ತಿನಾದ್ಯಂತ ಸೈನಿಕ ಸಂಸ್ಕೃತಿಯ ಭಾಗವಾಗಿದೆ. ಈ ದೌರ್ಜನ್ಯಕ್ಕೆ ನಮ್ಮವರು- ಅನ್ಯರು ಎಂತೇನಿಲ್ಲ. ಕೆಲವು ವರ್ಷಗಳ ಹಿಂದೆ, ಈಶಾನ್ಯ ಭಾರತದ ಮಹಿಳೆಯರು ಬೆತ್ತಲಾಗಿ ಸೈನಿಕ ಕಛೇರಿಗಳ ಮುಂದೆ ನಿಂತು ಮಾಡಿದ ಪ್ರತಿಭಟನೆ ಇದಕ್ಕೆ ಸಾಕ್ಷಿ. ಈ ಆತ್ಮಕತೆಯು ಯುದ್ದಗಳ ಸೋಲು-ಗೆಲುವಿನ ಲೆಕ್ಕಾಚಾರಗಳಲ್ಲಿ ನಗಣ್ಯವಾಗುಳಿವ ಜನರ ನೋವನು. ಹಿಡಿದಿಟ್ಟುಕೊಡುತ್ತ, ಯುದ್ಧಸಂಸ್ಕೃತಿಯ ಬಗ್ಗೆಯೇ ಹೇವರಿಕೆ ಹುಟ್ಟಿಸುತ್ತದೆ. ವೈರುಧ್ಯವೆಂದರೆ, ಮಾನವೀಯ ತುಡಿತ ಮತ್ತು ನಾಗರಿಕ ಹಕ್ಕುಪ್ರಜ್ಞೆಯಿಂದ ಹುಟ್ಟಿರುವ ಈ ಕಥನದಲ್ಲಿ ಯೂರೋಪಿಯನರು ದೇಶಗಳನ್ನು ಅವುಗಳ ಇಚ್ಚೆಗೆ ವಿರುದ್ಧವಾಗಿ ಆಕ್ರಮಿಸಿಕೊಂಡಿರುವುದು ತಪ್ಪೆಂಬ ನಿಲುವು ಇಲ್ಲದಿರುವುದು. ರಹಮತ್ ತರೀಕೆರೆ
Share

Secure Payments

Shipping in India

Great Value & Quality
Create your own online store for free.
Sign Up Now