Homeಕೋತಿಗಳು
ಕೋತಿಗಳು
ಕೋತಿಗಳು
Standard shipping in 4 working days

ಕೋತಿಗಳು

₹90
₹81
Saving ₹9
10% off
Product Description
ಊರಿಗೆ ಹೊಸದಾಗಿ ಟಿ.ವಿ ಬಂದಾಗ ಜನಗಳಿಗೆ ಕೋತಿಗಳ ಹಾವಳಿ ನಿಜಕ್ಕೂ ಭರಿಸಲಸಾಧ್ಯವೆನ್ನಿಸಿತ್ತು. ಓಣಿಯ ಮಂದಿಯಲ್ಲಾ ಯಾವುದೊ ಕಣ್ಣೀರು ಹರಿಸುವ ಧಾರಾವಾಹಿಯನ್ನು ನೋಡುತ್ತಾ ಕುಳಿತಿದ್ದರೆ ಕೋತಿಗಳು ಅಂಟೆನಾ ಮೇಲೆ ಹಾರಿ ಪರದೆಯಲ್ಲಿ ಬರೀ ಚುಕ್ಕೆಗಳನ್ನು ಮೂಡಿಸುತ್ತಿದ್ದವು. ಜನರೆಲ್ಲಾ 'ಹೋ... ಎಂದು ಕಿರುಚುತ್ತಿದ್ದರು. ಮತ್ತೆ ಯಾರಾದರೊಬ್ಬರು ಮಾತಿಗೆ ಹತ್ತಿ, ಆಂಟಿನಾವನ್ನು ದಶ ವಿಷ್ಣುಗಳಿಗೆ ತಿರುಗಿಸಿ, ಕೆಳಗಿನಿಂದ ಸರಿ ಬಂತು, ಸರಿ ಬಂತು..' ಅಂತ ಕೂಗಿದ ಮೇಲೆ ಟಿ.ವಿ ನೋಡಲು ಓಡಿ ಹೋದರೆ ಮತ್ತೆ ಹತ್ತು ನಿಮಿಷಕ್ಕೇಲ್ಲಾ ಇನ್ನೊಂದು ಕೋತಿ ಅದರ ಮೇಲೆ ಹಾರುತ್ತಿತ್ತು. ಕೆಲವರು ಹಾಆಮುಳನ್ನು ಅಂಟೆನಾದ ಮೇಲೆ ಹಾಕಿ ನೋಡಿದರು. ಮತ್ತೆ ಕೆಲವರು ಭಯಂಕರ ಬಣ್ಣದ ಬಟ್ಟೆಗಳನ್ನು ಅದರ ಮೇಲೆ ಹರಡಿದಳು. ಮತ್ತೆ ಕೆಲವರು ಎತ್ತರದ ಶೋಲನ್ನು ಅಗಿದು ಆಂಟೆನಾ ಏಲಿಸಿದರು. ಏನಾದರೇನು? ಕೋತಿಗಳ ಹಾವಳಿ ನಿಲ್ಲಲಿಲ್ಲ. ಈ ಎಲ್ಲಾ ಸರಳ ಉಪಾಯಗಳನ್ನು ಧಿಕ್ಕರಿಸಿದ ಶಾನುಭೋಗ ಸುಬ್ಬಣ್ಣನವರು ಒಂದು ವಿಚಿತ್ರವಾದ ಆಧ್ಯಾತ್ಮಿಕ ಉಪಾಯವನ್ನು ಪ್ರಯೋಗಿಸಿದರು. ರಾಮನು ಚಿಲ್ಲು ಬಾಣ ಹಿಡಿದು ನಿಂತಿರುವ, ಪಳಪಳನೆ ಹೊಳೆಯುವ ಕ್ಯಾಲೆಂಡರನ್ನು ಆ ಆಂಟೆನಾಕ್ಕೆ ನೇತು ಹಾಕಿ ಎಷ್ಟಾದ್ರೂ ರಾಮ ನೋಡ್ತಿ... ಹೋಳಿ ಹೆಂಗೆ ಅವನ ಮೇಲೆ ಎಗರಕ್ಕೆ ಪಾಧ್ಯ?' ಅಂತ ಎಲ್ಲರ ಮುಂದೆ ಹೇಳಿದರು ಆದರೆ ಕೋತಿಗಳು ಯಾವುದೇ ತಾರತಮ್ಯ ತೋರದೆ ಆ ಕ್ಯಾಲೆಂಡರನ್ನು ಹರಿದು ಚಿಂದಿ ಡಾಯಿಸಿದಾಗ ನಿಜಕ್ಕೂ ಭ್ರಮನಿರಸನರಾದರು.
Share

Secure Payments

Shipping in India

Great Value & Quality
Create your own online store for free.
Sign Up Now