Homeಹರಿಚಿತ್ತ ಸತ್ಯ
ಹರಿಚಿತ್ತ ಸತ್ಯ
ಹರಿಚಿತ್ತ ಸತ್ಯ
Standard shipping in 4 working days

ಹರಿಚಿತ್ತ ಸತ್ಯ

₹140
₹126
Saving ₹14
10% off
Product Description
ನಿಧಾನಕ್ಕೆ ಕಣ್ಣು ತೆರೆದಳು. ಎಲ್ಲೆಲ್ಲೂ ನಿಶ್ಯಬ್ದ ಕಣ್ಣು ಕತ್ತಲಿಟ್ಟಂತಾಯಿತು. ಒಮ್ಮೆ ಕಣ್ಣು ಹೊಸೆದುಕೊಂಡಳು. ಸುತ್ತಲೂ ಕಣ್ಣಾಡಿಸಿದಳು. ಊಹೂಂ , ಯಾರೂ ಕಾಣಲಿಲ್ಲ ನಿಧಾನಕ್ಕೆ ಎದ್ದು ನಿಂತು ನಾಲ್ಕು ಹೆಚ್ಚಿ ಆ ಕಡೆ ಈ ಕಡೆ ಹಾಕಿ ನೋಡಿದಳು. ಊಹೂಂ , ಯಾರೂ ಕಾಣಲಿಲ್ಲ. ಎಲ್ಲಿಯೋ ಯಾವುದೋ ನೆರಳು ಅಲ್ಲಾಡಿದಂತೆ ಕಾಣಿಸಿತು. ಅದರ ಹತ್ತಿರ ಹೋಗಿ ನೋಡಿದಳು. ಊಹೂಂ, ಅದು ಒಂದು ತೆಳ್ಳನೆಯ ಬಂಡೆಯ ಕಲ್ಲು, ಆಕಾಶದಲ್ಲಿ ಆಗಲೇ ಸೂರ್ಯ ಮುಳುಗಿ ಚಂದ್ರ ಬಂದಿದ್ದ ಹುಣ್ಣಿಮೆಯ ಚಂದ್ರ ಬೋಳೆಯುತ್ತಿದ್ದ ಕೊಳದ ತುಂಬಾ ಬೆಳದಿಂಗಳನ್ನು ಚೆಲ್ಲಿದ್ದ ಪಡ್ಡಿ ಒಮ್ಮೆ ಹೋ ಎಂದು ಕೂಗಿದಳು. "ಹೂ, ಹೋ ಹೋ ಎಂದು ಅವಳದೇ ಧ್ವನಿ ಪ್ರತಿಧ್ವನಿಯಾಗಿ ಬಂತು. ಮತ್ತೆ ಕೊಳದ ಬಳಿ ಬಂದು ನೋಡಿದಳು. ಅಲ್ಲಿ ಅವಳ ಟೆಲವರಿಚಿತ ವಸ್ತುವಿತ್ತು ಸುವಾಸನೆ ಭರಿತ, ಕೆಂಪು ಹೊಳಪಿನ ದಾರದಿಂದ ಭತಿದ ಚಿತ್ರವೊಂದು ಅವಳಿಗಾಗಿ ತಾವರೆಯ ಎಲೆಯ ಮೇಲೆ ಕುಳಿತಿತ್ತು . ಚಾಚಿದಳು. ಸಿಗಲಿಲ್ಲ. ಲಂಗವನ್ನು ಎತ್ತಿಕೊಂಡು ಎರಡು ಹೆಜ್ಜೆ ನೀರಿನಲ್ಲಿ ನಡೆದಳು. ಚಿತ್ರ ಕೈಗೆ ಸಿಕ್ಕಿತು. ತಾವರೆಯ ಎಲೆಯ ಮೇಲೆ ಕುಳಿತ ಆ ಚಿತ್ರದ ಸುರುಳಿಗೆ ಒಂದು ಹನಿ ನೀರೂ ತಾಕಿದ್ದಿಲ್ಲ. ಹಗೂರಕ್ಕೆ ಅದನ್ನು ಬಿಡಿಸಿದಳು, ಬೆಳದಿಂಗಳ ಬೆಳಕಿನಲ್ಲಿ ಆ ಚಿತ್ರ ಸ್ಪಷ್ಟವಾಗಿ ಗೋಚರಿಸಿತು.
Share

Secure Payments

Shipping in India

Great Value & Quality
Create your own online store for free.
Sign Up Now