Homeಮಹಾಮಾರಿ ಕೊರೊನಾ
ಮಹಾಮಾರಿ ಕೊರೊನಾ
ಮಹಾಮಾರಿ ಕೊರೊನಾ
Standard shipping in 4 working days

ಮಹಾಮಾರಿ ಕೊರೊನಾ

₹100
₹90
Saving ₹10
10% off
Product Description
ಕೊರೊನಾ ವೈರಾಣುವಿನ ಸದ್ದು ಕೇಳಲು ಶುರುವಾದುದು 2019ರ ವರ್ಷಾಂತ್ಯದಲ್ಲಿ. ಆದರೆ ಅದು ಉತ್ತುಂಗಕ್ಕೆ ಹೋದುದು ಜನವರಿ 2020ರ ಮೂರನೆಯ ವಾರದಲ್ಲಿ ಕ್ರಮೇಣ ಅದು ಉಪಶಮನಗೊಂಡದ್ದು ಜನವರಿ ತಿಂಗಳ ಕೊನೆಯಲ್ಲಿ, ಉಪನಿಷದ್ ವಾಕ್ಯವೊಂದಿದೆ. “ಋತು ಸಂಧಿಷು ವೈ ವ್ಯಾಧಯ ಜಾಯಂತೇ” ಅಂದರೆ ಋತು ಸಂಧಿಗಳಲ್ಲಿ ಸಾಂಕ್ರಾಮಿಕ ರೋಗ ಉಂಟಾಗುವುವು. ಎಲ್ಲರೂ ಗಮನಿಸಿರಿ. ಸಂಕ್ರಾಂತಿ ಹಬ್ಬವು ಕೇವಲ ಋತು ಸಂಧಿಯಲ್ಲ. ಅಯನಗಳ ಸಂಧಿ, ಅಂತಹ ಸಂಧಿಕಾಲದ ಆಚರಣೆಯೇ ಸಾಂಕ್ರಾಮಿಕ ಕಾಯಿಲೆ ತಡೆಗಿರುವ ಏಕೈಕ ಉಪಾಯ. ಆಯುರ್ವೇದ ಶಾಸ್ತ್ರದ ಪ್ರಕಾರ ಮುದ್ದ ಅಂದರೆ ಹೆಸರು ಅತ್ಯಂತ ಪಥ್ಯತಮ. ಹೆಸರು ಬೇಳೆಯ ಹೊಂಗಲ್ ದೇಹಕ್ಕೆ ಹಿತ. ಖಾರ ಪೊಂಗಲ್ ತಯಾರಿಕೆಗೆ ಬಳಸುವ ಮೆಣಸು ಕಾಳು ಮತ್ತು ಶುಂಠಿಯ ಯಥೇಚ್ಛ ಬಳಕೆ ದೇಹದ ತ್ರಿದೋಷ ಸಮಸ್ಥಿತಿಗೆ ಪೂರಕ. ಸಿಹಿ ಪೊಂಗಲ್ ತಯಾರಿಸಲು ಬೆಲ್ಲ ಬೇಕು. ಅದು ಕೂಡ ರೋಗ ನಿರೋಧಕತೆ ಏರಿಸಲು ಪೂರಕ. ಎಲಚಿ ಹಣ್ಣು, ಎಳ್ಳು ಪರಿಪೂರ್ಣ ಆಹಾರ. ಹೀಗೆ ಮಾನಸಿಕ ಮತ್ತು ದೈಹಿಕ ದೃಢತೆಯ ಪೂರಕ ವಾತಾವರಣ ನಿರ್ಮಾಣವೇ ಸಂಕ್ರಾಂತಿ ಹಬ್ಬದ ಆಚರಣೆಯ ಮೂಲ ತಳಹದಿ. ಶಿವರಾತ್ರಿಯ ಉಪವಾಸ, ಜಾಗರಣೆಯಂತಹ ಸರಳ ಸಂಗತಿಗಳಿಂದ ರೋಗ ನಿರೋಧಕ ಶಕ್ತಿ ವೃದ್ಧಿ, ಶಿವ ಪೂಜೆಗೆ ಸಲ್ಲುವ ಬಿಲ್ಪತ್ರೆ ಖಂಡಿತ ಸಂಜೀವಿನಿಯೇ ಸೈ. ಮಾಘ ಮತ್ತು ಕುಂಭ ಮಾಸದ ನದಿ ಸ್ನಾನದ ಮೂಲ ಉದ್ದೇಶವೂ ಇಂತಹದೇ. ನಸುಕಿನಲ್ಲಿ ಬೇಗ ಏಳುವುದಷ್ಟೆ ಅಲ್ಲ, ಚಳಿಗಾಲ ಕಳೆದು ಸೆಖೆಯ ದಿನಗಳಲ್ಲಿ ದೇಹದ ವ್ಯಾಧಿಕ್ಷಮತೆ ಹೆಚ್ಚಿಸುವ ಉಪಾಯಗಳು,
Share

Secure Payments

Shipping in India

Great Value & Quality
Create your own online store for free.
Sign Up Now