Homeಮಿಲ್ಖಾಸಿಂಗ್ ಜೀವನ ಕಥನ
ಮಿಲ್ಖಾಸಿಂಗ್ ಜೀವನ ಕಥನ
ಮಿಲ್ಖಾಸಿಂಗ್ ಜೀವನ ಕಥನ
Standard shipping in 4 working days

ಮಿಲ್ಖಾಸಿಂಗ್ ಜೀವನ ಕಥನ

₹150
₹135
Saving ₹15
10% off
Product Description

 ಮಿಲ್ಖಾಸಿಂಗ್‌ನ ಜೀವನ ಕೇವಲ ಕ್ರೀಡಾ ಜಗತ್ತಿಗೆ ಮಾತ್ರವಲ್ಲ, ನಿತ್ಯ ಬದುಕಿಗೂ ಸ್ಪೂರ್ತಿ. ಏಕೆಂದರೆ ಅವರ ಜೀವನವನ್ನು ನಮ್ಮ ಜೀವನದೊಂದಿಗೆ ತಾಳೆ ಮಾಡಿದಾಗ ನಾವೇ ಅವರಾಗಿ ಬಿಡುತ್ತೇವೆ. ಆದರೆ ಸಂಕಷ್ಟಗಳ ಮಧ್ಯೆಯೂ ಛಲದಿಂದ ಜೀವನವನ್ನು ರೂಪಿಸಿಕೊಂಡು ಉನ್ನತ ಹಂತಕ್ಕೆ ತಲುಪಿದ ಅವರ ಜೀವನ ನಮಗೆಲ್ಲಾ ಮಾದರಿಯಾಗುತ್ತದೆ. ಅವರ ಪ್ರತೀ ನಡೆಯು ಜೀವನಕ್ಕೆ ಸಾಮೀಪ್ಯ ಎನಿಸದಿರದು. ಇಂತಹ ಮಹಾನ್ ಚೇತನದ ಬಗ್ಗೆ ಬರೆಯವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ಆದರೆ ಈ ಬರಹದ ಮೂಲಕ ಅವರ ಜೀವನದ ಕೆಲ ಆಯಾಮಗಳನ್ನು ನೋಡುವ ಅವಕಾಶ ನನ್ನದಾಯಿತು.

 

- ಆರ್. ಬಿ ಗುರುಬಸವರಾಜ ( ಲೇಖಕರು)


ಇದು ಕೇವಲ ಮಿಲ್ಖಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಖಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ.

• ಸತತ ಮೂರು ವರ್ಷ ಬರಿಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ ಓಟಗಾರನ ರೋಚಕ ಜೀವನ ಕಥನ.

• ದೇಶ ವಿಭಜನೆಯ ವೇಳೆ ತನ್ನ ಕಣ್ಣ ಮುಂದೆ ತಂದೆ ಮತ್ತು ಕುಟುಂಬದವರನ್ನು ಕಳೆದುಕೊಂಡ ಆ ಘಟನೆ ಓದತೊಡಗಿದರೆ ಕಠಿಣ ಮನಸ್ಸಿನವರೂ ಕಣ್ಣೀರು ಸುರಿಸುತ್ತಾರೆ.

• ಸೈನ್ಯಕ್ಕೆ ಸೇರಿದ ಯುವಕ ಅಂತರರಾಷ್ಟ್ರೀಯ ಮಟ್ಟದ ಓಟಗಾರನಾಗುವ ಪರಿಶ್ರಮ ಎಲ್ಲರಿಗೂ ಮಾದರಿಯಾಗುತ್ತದೆ.

• ಓಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕ ಗಳಿಸುವುದನ್ನು ನೋಡಲು ಹಾತೊರೆದು ಮರೆಯಾದ ಅಪ್ರತಿಮ ಸಾಧಕನ ಜೀವನದ ಮೈಲುಗಲ್ಲುಗಳ ಪಯಣ ಇಲ್ಲಿದೆ.

• ಏಷ್ಯನ್ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಓಟಗಾರನ ಕೌಶಲ್ಯದ ಹಿಂದಿನ ತಂತ್ರಗಾರಿಕೆ ತಿಳಿಯಲು ಈ ಕೃತಿ ಸಹಾಯಕ

45.6 ಸೆಕೆಂಡುಗಳಲ್ಲಿ 400 ಮೀಟರ್ ಓಡಿ ವಿಶ್ವದಾಖಲೆ ಮಾಡಿದ ಮಾಂತ್ರಿಕ ಶಕ್ತಿಯ ಹಿಂದಿನ ಗುಟ್ಟು ತಿಳಿಯಲು ಓದಲೇಬೇಕಾದ ಪುಸ್ತಕ.

Share

Secure Payments

Shipping in India

Great Value & Quality
Create your own online store for free.
Sign Up Now