Homeಪರ್ದಾ & ಪಾಲಿಗಮಿ
ಪರ್ದಾ & ಪಾಲಿಗಮಿ
ಪರ್ದಾ & ಪಾಲಿಗಮಿ
Standard shipping in 4 working days

ಪರ್ದಾ & ಪಾಲಿಗಮಿ

₹380
₹342
Saving ₹38
10% off
Product Description

Purdah and Polygomy: Life In An Indian Muslim Household (‘ಪರ್ದಾ & ಪಾಲಿಗಮಿ: ಭಾರತೀಯ ಮುಸ್ಲಿಮ್ ಕುಟುಂಬವೊಂದರಲ್ಲಿ ಬದುಕು’) ಎಂಬ ಹೆಸರಿನ ಇಂಗ್ಲೀಷ್ ಕಾದಂಬರಿ ಬೆಂಗಳೂರಿನ ಹೊಸಾಳಿ ಮುದ್ರಣಾಲಯದಲ್ಲಿ ಮುದ್ರಿತವಾಗಿ 1944ರಲ್ಲಿ ಪ್ರಕಟವಾಯಿತು. ಇದನ್ನು ರಚಿಸಿದವರು ಬೆಂಗಳೂರಿನ ಇಕ್ಬಾಲುನ್ನೀಸಾ ಹುಸೇನ್ ಎಂಬ ಮುಸ್ಲಿಂ ಮಹಿಳೆ. ಆ ಮೂಲಕ ಇಂಗ್ಲೀಷ್‌ನಲ್ಲಿ ಸಾಮಾಜಿಕ ಕಾದಂಬರಿಯನ್ನು ಬರೆದ ಮೊದಲ ಭಾರತೀಯ ಮುಸ್ಲಿಮ್ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿ, ಇಕ್ಬಾಲುನ್ನೀಸಾ ಭಾರತೀಯ ಇಂಗ್ಲೀಷ್ ಸಾಹಿತ್ಯದ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.


ಈ ಕೃತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲ್ಪಟ್ಟ ಪ್ರಥಮ ಮುಸ್ಲಿಮ್ ಸುಧಾರಣಾವಾದಿ ಕಾದಂಬರಿಯೆಂದು ಅಥವಾ ಪ್ರಥಮ ಸ್ತ್ರೀವಾದಿ ಕಾದಂಬರಿಯೆಂದು ನೋಡಬಹುದು. ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆಯು ತನ್ನ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇತ್ತೀಚಿನ ಬೆಳವಣಿಗೆಯಲ್ಲ ಮತ್ತು ಕೇವಲ ಪಾಶ್ಚಾತ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ವೈಚಾರಿಕತೆಯೂ ಅಲ್ಲ ಎಂಬುದಕ್ಕೆ ಇಕ್ಬಾಲುನ್ನೀಸಾ ಹುಸೇನ್ ಅವರ “ಪರ್ದಾ & ಪಾಲಿಗಮಿ” ಕಾದಂಬರಿ ಅತ್ಯುತ್ತಮ ನಿದರ್ಶನ. 21ನೆಯ ಶತಮಾನದಲ್ಲಿಯೂ ‘ಧಾರ್ಮಿಕ ಅಸ್ಮಿತೆ’ ಎಂಬ ನೆಪದಲ್ಲಿ ಎಲ್ಲಾ ಧರ್ಮಗಳ ನಾಯಕರೂ ಪರಂಪರಾಗತ ಸ್ತ್ರೀ-ಪುರುಷ ಶ್ರೇಣೀಕರಣವನ್ನು ಹಿಂಬಾಗಿಲಿಂದ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಕಾದಂಬರಿ ಇಂದೂ ಕೂಡಾ ಅತ್ಯಂತ ಪ್ರಸ್ತುತವಾಗಿದೆ.

ಒಂದು ಅತ್ಯಂತ ಪ್ರಸ್ತುತವಾಗಿರುವ ಇಂಗ್ಲೀಷ್ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ದಾದಾಪೀರ್ ಜೈಮನ್ ಮತ್ತು ಈ ಕೃತಿಯನ್ನು ಅನುವಾದಿಸಲು ಜೈಮನ್ ಅವರನ್ನು ಪ್ರೋತ್ಸಾಹಿಸಿ, ಅನಂತರ ‘ಛಂದ ಪುಸ್ತಕ’ ಎಂಬ ತಮ್ಮದೇ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯ ಮೂಲಕ ಅನುವಾದಿತ ಕೃತಿಯನ್ನು ಪ್ರಕಟಿಸುತ್ತಿರುವ, ಪ್ರಸಿದ್ಧ ಕತೆಗಾರ-ಕಾದಂಬರಿಕಾರ ವಸುಧೇಂದ್ರ ಇವರಿಬ್ಬರಿಗೂ ನನ್ನ ಹಾರ್ದಿಕ ಅಭಿನಂದನೆಗಳು.

ಡಾ. ಸಿ.ಎನ್. ರಾಮಚಂದ್ರನ್

Share

Secure Payments

Shipping in India

Great Value & Quality
Create your own online store for free.
Sign Up Now