Homeದೀಪವಿರದ ದಾರಿಯಲ್ಲಿ
ದೀಪವಿರದ ದಾರಿಯಲ್ಲಿ
ದೀಪವಿರದ ದಾರಿಯಲ್ಲಿ
Standard shipping in 4 working days

ದೀಪವಿರದ ದಾರಿಯಲ್ಲಿ

₹160
₹144
Saving ₹16
10% off
Product Description


ನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬಹಿರಂಗವಾದ ಚರ್ಚೆಗಳು ನಡೆದದ್ದು ಕಡಿಮೆ. ಈ ಕುರಿತು ನಮ್ಮ ತಿಳವಳಕೆಗಳನ್ನು ಹೆಚ್ಚಿಸುವ ಪುಸ್ತಕಗಳಾಗಲೀ, ಲೇಖನಗಳಾಗಲೇ ಪ್ರಕಟವಾದದ್ದು ಕೂಡಾ ಕಡಿಮೆಯೆ, ಗಂಡು-ಗಂಡುಗಳ ನಡುವಣ ರತಿ ಅಥವಾ ಒಂದು ಗಂಡಿಗೆ ಇನ್ನೊಂದು ಗಂಡಿನ ಮೇಲಿನ ಮೋಹ ಹುಟ್ಟುವುದು ಅಸಹಜವೇನಲ್ಲವಾದರೂ ಅದರ ಬಗ್ಗೆ ಅಮೆರಿಕಾದಲ್ಲೋ, ಮೆಕ್ಸಿಕೋದಲ್ಲೋ ಮಾತಾಡುವಷ್ಟು ಸಹಜವಾಗಿ ನಾವು ಮಾತಾಡಲಾರೆವು. ಸಲಿಂಗ ಪ್ರೇಮಿಗಳನ್ನು ನಮ್ಮ ಸಮಾಜವು ಆದರಿಸುವ ಉದಾರತೆಯನ್ನೂ ತೋರಿಸಿಲ್ಲ.


ಈ ಕಾದಂಬರಿಯು ಅಂತಹ ಲೈಂಗಿಕತೆಯ ವಿಭಿನ್ನ ಮಜಲುಗಳನ್ನು ಧೈರ್ಯವಾಗಿ ಶೋಧಿಸುತ್ತದೆ. ರವೀಂದ್ರ, ಆಕಾಶ್ ಮತ್ತು ಸುಕೇಶರ ನಡುವಣ ತ್ರಿಕೋನ ಸಂಬಂಧಗಳ ಜೊತೆಗೆ ಗಂಡಸರ ಹಿಂದೆ ಹೋಗುವ ರಘುಪತಿಯ ಸಮಸ್ಯೆಗಳೂ ಬಿಚ್ಚಿಕೊಳ್ಳುತ್ತವೆ. ಗೇಸೆಕ್ಸ್ ವೀಡಿಯೋ ನೋಡುವ ಗಂಡನನ್ನು ತೊರೆದು, ಅವನ ಹೆಂಡತಿ ಗುಜರಾತಿಯೊಬ್ಬನ ಸ್ನೇಹ ಮಾಡುತ್ತಾಳೆ. ಈ ಎಲ್ಲಾ ಘಟನೆಗಳನ್ನು ಸಮಾಜವು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತಾ ಹೋಗುತ್ತದೆ. ಇಂಥ ಸಂಕೀರ್ಣ ಸ್ಥಿತಿಯನ್ನು ಕಾದಂಬರಿ ತಣ್ಣಗೆ ಕಟ್ಟಿಕೊಡುತ್ತದೆ.


ಈ ಕಾದಂಬರಿಯ ವಸ್ತು ಮತ್ತು ಪಾತ್ರಗಳು ಕನ್ನಡಕ್ಕೆ ತೀರಾ ಹೊಸದು. ಕಾನೂನಿನ ತೊಡಕುಗಳು, ಸಂಪ್ರದಾಯಸ್ಥರ ಅಕ್ರಮಣ, ಮಡಿವಂತಿಕೆ, ನಿಷೇಧ, ಭಯ ಇತ್ಯಾದಿ ಕಾರಣಗಳಿಂದಾಗಿ LGBTQ ಕಥನಗಳು ಸಾಹಿತ್ಯದ ಮುಖ್ಯ ಧಾರೆಗೆ ಬರಲೇ ಇಲ್ಲ.


ಸುಶಾಂತ್ ಕೋಟ್ಯಾನ್, ತುಂಬ ಧೈರ್ಯವಹಿಸಿ ಈ ಕಾದಂಬರಿಯನ್ನು ಬರೆದು ನಮ್ಮ ಅರಿವಿನ ಗಡಿರೇಖೆಗಳನ್ನು ವಿಸ್ತರಿಸಿದ್ದಾರೆ. ಅವರಿಗೆ ಅಭಿನಂದನೆಗಳು.

Share

Secure Payments

Shipping in India

Great Value & Quality
Create your own online store for free.
Sign Up Now