Homeಶ್ರೀ ಆನಂದರಾಮಾಯಣಂ
ಶ್ರೀ ಆನಂದರಾಮಾಯಣಂ
ಶ್ರೀ ಆನಂದರಾಮಾಯಣಂ
Standard shipping in 4 working days

ಶ್ರೀ ಆನಂದರಾಮಾಯಣಂ

 
₹1,600
Product Description

ಇಂಥ ವಿಶಿಷ್ಟವಾದ ಗ್ರಂಥದ ಅನುವಾದಗಳನ್ನು ನಾವು ದೇಶಭಾಷೆಗಳಲ್ಲಿ ನೋಡುವುದು ಕಷ್ಟ. ಆದರೆ ನಮ್ಮ ಕನ್ನಡನುಡಿಗೆ ಇದನ್ನು ದಕ್ಕಿಸಿಕೊಟ್ಟವರು ಸ್ವರ್ಗೀಯರಾದ ವಿದ್ವಾನ್ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿಗಳು, ಅವರು ಸಂಸ್ಕೃತ-ಕನ್ನಡಗಳ ಪಂಡಿತರಾಗಿ ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದಲ್ಲಿದ್ದವರು, ಹನ್ನೆರಡು ಸಾವಿರಕ್ಕೂ ಹೆಚ್ಚು ಶ್ಲೋಕಗಳಿರುವ ಈ ಉದ್ಭಂಥವನ್ನು ಕೇವಲ ಮೂರು ವರ್ಷಗಳ ಅವಧಿಯಲ್ಲಿ ಅವರು ಅನುವಾದ ಮಾಡಿದಂತೆ ತೋರುತ್ತದೆ. ಇದು ನಿಜಕ್ಕೂ ಶ್ಲಾಧ್ಯವಾದ ಸಾರಸ್ವತ ಸೇವೆ. ಶಾಸ್ತ್ರಿಗಳಿಂದ ಇಂಥ ಸತ್ಕಾರ್ಯವನ್ನು ಮಾಡಿಸಿದ ಶ್ರೇಯಸ್ಸು ಮೈಸೂರು ಸಂಸ್ಥಾನದ ಕಟ್ಟಕಡೆಯ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಸಂಪೂರ್ಣವಾಗಿ ಸಲ್ಲುತ್ತದೆ. ಮಹಾರಾಜರ ವಿದ್ವತ್ತೋಷಣೆ ಮತ್ತು ಸಾಹಿತ್ಯ-ಸಂಗೀತನಿರ್ದಾಕಣಗಳು ನಮ್ಮ ದೇಶದ ಇತಿಹಾಸದಲ್ಲಿ ಪ್ರಖ್ಯಾತರಾದ ಚಂದ್ರಗುಪ್ತ, ಭೋಜರಾಜ, ಕೃಷ್ಣದೇವರಾಯರಂಥವರನ್ನು ನೆನಪಿಸುತ್ತದೆ. ಇಂಗ್ಲಿಷಿನಲ್ಲಿ ಕೂಡ ಇಂಥ ಆವೃತ್ತಿಗಳನ್ನು ನಾವು ನೋಡಲು ಸಾಧ್ಯವಿಲ್ಲ. ಹೀಗಿದ್ದಾಗ ಮಿಕ್ಕ ದೇಶಭಾಷೆಗಳ ಮಾತೇನು? ಹೀಗೆ ಸರ್ವವಿಧಗಳಿಂದಲೂ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸಿದ ಮತ್ತೊಬ್ಬ ಮಹಾರಾಜರನ್ನು ನಾವು ಕಾಣಲಾಗುವುದಿಲ್ಲ. ಇದು ಏಕಕಾಲದಲ್ಲಿ ಸನಾತನಧರ್ಮಕ್ಕೂ ನಾಡು-ನುಡಿಗಳಿಗೂ ಸಂದ ಅಪೂರ್ವಸೇವೆ, ಇದರಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಾಲ್ಗೊಂಡ ಎಲ್ಲರೂ ನಮಗೆ ವಂದನೀಯರು.




ಆಂಥ ಪಂಕ್ತಿಪಾವನರ ಶ್ರೇಣಿಗೆ ಸೇರಿದ ವಿದ್ವಾನ್ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿಗಳ ಮರಿಮಕ್ಕಳು ಇದೀಗ ತಮ್ಮ ಮುತ್ತಜ್ಜನವರ ಅನುವಾದವನ್ನು ಹಿಂದಿನಂತೆಯೇ ಸಮೂಲವಾಗಿ ಜನತೆಗೆ ಸಲ್ಲಿಸಲಿರುವುದು ನಿಜಕ್ಕೂ ಮುದಾವಹ, ಶಾಸ್ತ್ರಿಗಳ ಅನುವಾದವನ್ನು ಅದ್ಯಂತ ಗಮನಿಸಿದ ನನಗೆ ಅವರ ಭಾಷಾಂತರಕ್ರಮದ ಸರಳತೆ ಮತ್ತು ಪ್ರಾಮಾಣಿಕತೆಗಳು ಎದ್ದುಕಂಡಿದೆ. ಕೇವಲ ಮೂಲಗ್ರಂಥದ ಅನುವಾದವಲ್ಲದೆ ಪ್ರತಿಯೊಂದು ಸರ್ಗದ ಸಾರಾಂಶವನ್ನೂ ವಿಸ್ತ್ರತವಾಗಿ ಶಾಸ್ತ್ರಿಗಳು ಕೊಟ್ಟಿರುವುದು ತಾಳ್ಮೆಯಿಲ್ಲದವರಿಗೆ ದೊಡ್ಡ ಅನುಕೂಲವಾಗಿದೆ. ಅಂಥವರು ಈ ಸಾರಂಶಗಳನ್ನು ಓದಿಯೇ ಗ್ರಂಥಸ್ವಾರಸ್ಯವನ್ನು ಅರಿಯಬಹುದು. ಕನ್ನಡದಲ್ಲಿ ಸಾಗಿರುವ ರಾಮಾಯಣ ಅಧ್ಯಯನಗಳಿಗೆ ಈ ಪುನರ್ಮುದ್ರಿತ ಆವೃತ್ತಿ ಹೆಚ್ಚಿನ ಒತ್ತಾಸೆಯಾಗದಿರದು. ಒಟ್ಟಿನಲ್ಲಿ ಇದಕ್ಕೆ ಕಾರಣರಾದವರೆಲ್ಲರಿಗೆ ನನ್ನ ಅಭಿನಂದನೆಗಳು.




ರಾ. ಗಣೇಶ್

Share

Secure Payments

Shipping in India

Great Value & Quality
Create your own online store for free.
Sign Up Now