HomeThe untold story of ಕಶ್ಮೀರ್
The untold story of ಕಶ್ಮೀರ್
The untold story of ಕಶ್ಮೀರ್
Standard shipping in 4 working days

The untold story of ಕಶ್ಮೀರ್

₹210
₹189
Saving ₹21
10% off
Product Description

ಏನಿದೆ ಇದರಲ್ಲಿ....? ಕೇಳುವವರಿಗಾಗಿ.....?

ಕೇವಲ ಒಂದೆರಡು ದಿನದಲ್ಲಿ ಲಕ್ಷಾಂತರ ಹಿಂದೂಗಳು ನೆಲ ತೊರೆಯಬೇಕಾದರೆ ತಯಾರಿ ಅದೆಷ್ಟಿರಬೇಡ.. ಮತ್ತು ಹೊರಗಿನ ಬೆಂಬಲದ ಜೊತೆ ಈಗಿನ ನಮ್ಮ ಎಡ ಪಂಥೀಯರಂತೆ ಒಳ ಶತ್ರುಗಳ ಬೆಂಬಲ ಹೇಗಿದ್ದೀತು..?

ಯಾವಾಗ ಪಾಕಿಸ್ತಾನ ನೂರಲ್ಲ ಹತ್ತಾರು ಸಾವಿರ ಲೆಕ್ಕದಲ್ಲಿ ಭಯೋತ್ಪಾದಕರನ್ನು ಒಮ್ಮೆಲೆ ಪೂರೈಸಲು ಒಪ್ಪಿ ಮಹಮ್ಮದ್ ತರ್ಬಲಿ ಯನ್ನು ಮುಂದೆ ಬಿಟ್ಟು ಸ್ಕೇಚ್ ಹಾಕಿತ್ತೋ,

ಪರಿಸ್ಥಿತಿ ಅಯೋಮಯವಾಗಿ ಬಿಟ್ಟಿತ್ತು. ಬೆಟ್ಟ ವಿಳಿದು ಬರತೊಡಗಿದ್ದ ವಿದೇಶಿ ಪಾತಕಿಗಳಿಗೆ

ಪಾಕಿಸ್ತಾನ ಸೀದಾ ತನ್ನ ಎಡಭಾಗಕ್ಕೆ ಬೆರಳು ತೋರಿಸಿ ಇಶಾರೆ ಮಾಡಿ ಹಿಂದೆ ಸರಿದುಬಿಟ್ಟಿತ್ತು. ತಲೆ ಎತ್ತಿ ನಕಾಶೆ ನೋಡಿದರೆ ಅಲ್ಲಿದ್ದುದು ನತದೃಷ್ಟ ಹಿಂದೂ ಪಂಡಿತರು ಬದುಕುತ್ತಿದ್ದ ಕಾಶ್ಮೀರ್. ಮೊದಲ ಹಂತವಾಗಿ ಆರು ಸಾವಿರ ಧರ್ಮಯೋಧರು ಪಾಕಿಸ್ತಾನ ಕಡೆಯಿಂದ ಬೆಟ್ಟವಿಳಿಯತೊಡಗಿದ್ದರು. ಅವರ ಹಿಂದೆ, ಬರಲಿರುವ ಇಶಾರೆಗಾಗಿ ಕಾಯುತ್ತಾ ಮತ್ತೂ ನಾಲ್ಕೆöÊದು ಸಾವಿರ ಜೆಹಾದಿಗಳು ಬಂದೂಕಿನ ನಳಿಕೆ ಸವರುತ್ತಾ ಕೂತಿದ್ದರು.

ಹಾಗೆ ಒಳಬಂದರೆ ಅವರಿಗೆಲ್ಲ ಯಾರು ಏನು ಮಾಡಬೇಕು..?

ಧರ್ಮಯುದ್ಧದಲ್ಲಿ ಯಾರನ್ನು ಕೊಲ್ಲಬೇಕು..?

ಹೇಗೆ ಮಿಶನ್ ಕಾಶ್ಮೀರ ಇಂಪ್ಲಿಮೆಂಟ್ ಮಾಡಬೇಕು ಎಂದೆಲ್ಲ ನಿರ್ಧರಿಸಲು ಸ್ಥಳೀಯ ಸಮಿತಿಯೊಂದನ್ನು ರಚಿಸಲಾಗಿತ್ತು. ಪಾಕಿಸ್ತಾನದ ಇಶಾರೆಯ ಮೇರೆಗೆ ಹಾಗೆ ಒಳಬಂದಿದ್ದೇ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್ ಎಂಬ ಮನೆಹಾಳ ಸಂಘಟನೆ.

ಅದೇ ಜೆ.ಕೆ.ಎಲ್.ಎಫ್.

ಜೂನ್ ೧೯೭೬ ರಲ್ಲಿ ಹುಟ್ಟಿದ ಈ ಸಂಘಟನೆ ಮೂಲ ಇದ್ದಿದ್ದು ಅಜಾದ್ ಕಾಶ್ಮೀರ್, ಮುಜ್ಜಾಪ್ಪರಾ ಬಾದ್‌ನಲ್ಲಿ. ಅಮಾನುಲ್ಲಾಖಾನ್ ಮತ್ತು ಮಕ್ಬೂಲ್ ಭಟ್ ಇದರ ಸಂಸ್ಥಾಪಕ.

ಆದರೆ ಇದನ್ನು ದೊಡ್ಡ ಮಟ್ಟದಲ್ಲಿ ಬಳಕೆಗೂ, ಪ್ರಚಾರಕ್ಕೂ, ಇನ್‌ವಾಲ್ವ ಮಾಡಿದವನು ವ್ಯಾಪಕತೆಗೆ ಒಳಪಡಿಸಿದವನು ಯಾಸಿನ್ ಮಲಿಕ್. ಇವರ ಉದ್ದೇಶ ಕಾಶ್ಮೀರಿ ರಾಷ್ಟ್ರೀಯತೆ ಮತ್ತು ಪ್ರತ್ಯೇಕತಾವಾದ. (ನಿಮಗೆ ನೆನಪಿರಲಿ ಈ ಹೆಸರು. ಇವನೊಡನೆ ಈ ದೇಶದ ಅತಿದೊಡ್ಡ ಬುದ್ಧಿಜೀವಿಗಳೆಂದು ಹೆಸರು ಮಾಡಿದವರೆಲ್ಲ ಮುಂದೊಮ್ಮೆ ಬಹಿರಂಗವಾಗಿ ಕೈ ಜೋಡಿಸಿದ್ದರು. ದೇಶದ ವಿರುದ್ಧವೇ ದಶಕಗಳ ಕಾಲ ಮಾತಾಡಿದ ಹೆಂಗಸರೆಲ್ಲ ಇವನ ವಲಯಕ್ಕೆ ಸೇರಿದ್ದರು) ವಿಚಿತ್ರ ಎಂದರೆ ಇದರ ಕಾರ್ಯಾಚರಣೆ ಭಾರತದಲ್ಲಾದರೂ ಯುನೈಟೆಡ್ ಕಿಂಗಡಮ್, ಬರ್ಮಿಂಗ್ ಹ್ಯಾಮ್ ಮತ್ತು ಮಧ್ಯ ಏಷಿಯಾದಲ್ಲೆಲ್ಲ ಇದರ ಮೊದಲ ಕಛೇರಿಗಳು ಆರಂಭವಾಗಿದ್ದವು.

ಸರ್ವ ತಯಾರಿಯ ನಂತರ ಇದು ಕಾಶ್ಮೀರಕ್ಕೆ ಕಾಲಿಟ್ಟಿತು. ಇದರ ಇನ್ನೊಂದು ಅಂಗ ಸಂಸ್ಥೆಯೇ ಜೈಸ್ ಮೊಹಮ್ಮದ್. ದೇಶದಲ್ಲಿ ಇದಕ್ಕೆ ತತಕ್ಷಣಕ್ಕೆ ಯಶಸ್ಸು ಲಭ್ಯವಾಗದಿದ್ದಾಗ ಫೆಬ್ರುವರಿ ೧೯೮೪ ಭಾರತೀಯ ರಾಯಭಾರಿ ರವೀಂದ್ರ ಮಾತ್ರೆಯನ್ನು ಬರ್ಮಿಂಗ್ ಹ್ಯಾಮ್‌ನಲ್ಲಿ ಕಿಡ್ನಾಪ್ ಮಾಡಿ ಅಮಾನುಲ್ಲಾಖಾನ್‌ನ (ಮಹಾಜ್ ಇ ರಿಶುಮಾರಿ ಸ್ಥಾಪಕ) ಇಶಾರೆಯ ಮೇರೆಗೆ ಕೊಂದುಹಾಕಿತ್ತು. ಆ ಹೊತ್ತಿಗಾಗಲೇ ಖಲಿಸ್ತಾನಿಗಳಿಗೂ ಬಾಹ್ಯ ಬೆಂಬಲ ಸರಹದ್ದಿನಾಚೆಯಿಂದ ದಕ್ಕುತ್ತಿದ್ದುದು ಖಚಿತವಾಗಿತ್ತು.

ಇದಕ್ಕೂ ಜಿಯಾ ಉಲ್ ಹಕ್ ಮತ್ತು ಐ.ಎಸ್.ಐ. ಬೆಂಬಲ ಲಭ್ಯವಾಗುತ್ತಿದ್ದಂತೆ ಈ ಸಂಘಟನೆ ದೊಡ್ಡ ಮಟ್ಟದಲ್ಲಿ ೧೯೮೭ ರ ಚುನಾವಣೆಯಲ್ಲೂ ಅಕ್ರಮವೆಸಗಿತ್ತು. ಕಾರಣ ಕಣಿವೆ ಖಾಲಿ ಮಾಡಿಸಬೇಕೆಂದರೆ ಅಧಿಕಾರದ ಭಾಗವಾಗುವುದೂ ಮತ್ತು ಅಧಿಕಾದಲ್ಲಿದ್ದವರ ಹತ್ತಿರವಾಗುವುದೂ ತುಂಬ ಅಗತ್ಯವಿತ್ತು. ಇದು ಕಾಶ್ಮೀರ್ ಪಂಡಿತರ ಮೇಲೆ ಆಗಲಿದ್ದ ದೊಡ್ಡಮಟ್ಟದ ದಾಳಿಗೆ ಅತ್ಯಂತ ವ್ಯವಸ್ಥಿತ ತಯಾರಿಯ ಭಾಗವೇ ಆಗಿತ್ತು. ಆಗಿನ ಚುನಾವಣೆಯನ್ನು ನೋಡಿದವರಿಗಾಗಲೇ ಕಣಿವೆಯ ಭವಿಷ್ಯದ ಅಂದಾಜಾಗಬೇಕಿತ್ತು.

ಆದರೆ ಅದ್ಯಾಕೋ ಆಗಲೇ ಇಲ್ಲ.

ಕಾರಣ ಭಾರತದಲ್ಲಿ ಏನಾಗಲ್ಲ ಬಿಡು.

ಆದರೂ ನಮಗಾಗಲ್ಲ ಎಂಬ ನಂಬಿಕೆಯಿದೆಯಲ್ಲ,

ಅದನ್ನೆ ಕಾಶ್ಮೀರಿಗಳೂ ನಂಬಿದ್ದರು.

ಅದಕ್ಕಾಗಿ ಸರಿಯಾದ ಬೆಲೆಯನ್ನೇ ತೆರಬೇಕಾಯಿತು. 

ಉಳಿದ ಕಥಾನಕ್ಕಾಗಿ ನಿರೀಕ್ಷಿಸಿ.. ಇದು ನೀವು ಓದಿರದ ಕತೆಗಳ ಮಾಹಿತಿ .

Share

Secure Payments

Shipping in India

Great Value & Quality
Create your own online store for free.
Sign Up Now