Homeಯಾನ ಸಂಸ್ಕೃತಿ
ಯಾನ ಸಂಸ್ಕೃತಿ
ಯಾನ ಸಂಸ್ಕೃತಿ
Standard shipping in 4 working days

ಯಾನ ಸಂಸ್ಕೃತಿ

₹200
₹180
Saving ₹20
10% off
Product Description

ಬಹಳಷ್ಟು ಭಾರತೀಯರು ಇರುವ ಸಿಂಗಪುರ ನಮಗೆ ಸನಿಹದ್ದು, ಆದರೆ 20 ವರ್ಷಗಳ ಹಿಂದೆ ಸಿಂಗಪುರದ ಬಗ್ಗೆ ತಿಳಿದದ್ದು ಅತ್ಯಲ್ಪ. 'ಯಾನ ಸಂಸ್ಕೃತಿ' ಸಿಂಗಪುರದ ಹೊರನೋಟ, ಒಳನೋಟಗಳನ್ನು ಪರಿಚಯಿಸಿತ್ತು. ಇಂದು 20 ವರ್ಷಗಳ ನಂತರವೂ ಸಿಂಗಪುರದ ಬಗ್ಗೆ ಇನ್ನಷ್ಟು ಆಮೂಲಾಗ್ರವಾದ ಒಳಚಿತ್ರವನ್ನು ನೀಡುವ ಮತ್ತೊಂದು ಕೃತಿಯನ್ನು ನಾನಿನ್ನೂ ಓದಿಲ್ಲ. ಸಿಂಗಪುರಕ್ಕೆ ನೇರಸೇತುವೆ ಕಟ್ಟುವ ಶಾಂತಾ ಅವರ ಈ ಪುಸ್ತಕಕ್ಕೆ ನನ್ನ ಮುನ್ನುಡಿಯ ಆಗತ್ಯವೇ ಇರಲಿಲ್ಲ. ಹಲವು ಪ್ರಕಾರದಲ್ಲಿ ಹರಡಿ ಹಬ್ಬಿದ ಅವರ ಸಾಹಿತ್ಯ ಬರಹದ ರುಚಿ ಉಂಡ ನನಗೆ, ಅವರ ಸಪ್ರೇಮ ಸ್ನೇಹದ ಸಿಹಿಯನ್ನು ಮೂರೂವರೆ ದಶಕಗಳಿಂದ ಸವಿದ ನನಗೆ, ಮುನ್ನುಡಿ ಬರೆಯುವ ನೆಪದಲ್ಲಿ 'ಯಾನ ಸಂಸ್ಕೃತಿಯನ್ನುʼ ಮತ್ತೊಮ್ಮೆ ಓದುವುದು ಖುಷಿಯ ಕಾಯಕವಾಯಿತು. ನನ್ನ ಅರಿವಿನ ಸರಹದ್ದನ್ನು ಹಿಗ್ಗಿಸಿದ 'ಯಾನ ಸಂಸ್ಕೃತಿ' ನಿಮಗೆ ಕೌತುಕದ ಔತಣವಾಗುವುದು ಖಂಡಿತ.


- ನೇಮಿಚಂದ್ರ


"Travel, in the younger sort, is a part of education; in the elder, a part of experience', ಎಂದು ಫ್ರಾನ್ಸಿಸ್ ಬೇಕಾನ್ ಹೇಳಿದ ಹಾಗೆ ಈ ಪ್ರವಾಸ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಗೊಂಡಿದೆ. ಏಕೆಂದರೆ ಇದರ ಲೇಖಕಿ ಶ್ರೀಮತಿ ಶಾಂತಾ ನಾಗರಾಜ್ ಅವರ ಮನಸ್ಸು ಸಂವೇದನಾ ಶೀಲವಾದದ್ದು; ಸಾಹಿತ್ಯ - ಕಲೆಗಳ ಸತತಾಭ್ಯಾಸದಿಂದ ಸೂಕ್ಷ್ಮ ಗೊಂಡದ್ದು. ಅನುಭವದ ಆಳಕ್ಕಿಳಿಯುವ ಶಕ್ತಿ ಇದ್ದಂತೆಯೇ ಸುತ್ತಲಿನ ಪ್ರಪಂಚವನ್ನು, ಅದರ ಆಗು ಹೋಗುಗಳನ್ನು ಕುತೂಹಲ, ಔತ್ಸುಕ್ಯಭರಿತ ಬೆರಗುಗಣ್ಣುಗಳಿಂದ ನೋಡುವ ಮಗುವಿನ ಮುಗ್ಧತೆಯೂ ಅವರಲ್ಲಿ ಇದೆ. ಹಾಗಾಗಿಯೇ ಸಿಂಗಪುರವನ್ನು, ಅಲ್ಲಿಯ ಜನರನ್ನು ಅಲ್ಲಿಯ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಗ್ರಹಿಸುವ ಸಂದರ್ಭದಲ್ಲಿಯೇ ಅವುಗಳನ್ನು ಕುರಿತಾದ ಸೂಜಿಗವೂ ಮಿಳಿತವಾಗಿರುತ್ತದೆ. ಇಂತಹ ಮುಗ್ಧತೆ-ಸೂಕ್ಷ್ಮತೆಗಳ ಸಮಪಾಕವೇ ನಿಮ್ಮ ಕೈಯಲ್ಲಿರುವ 'ಯಾನ ಸಂಸ್ಕೃತಿ', ಭೌತಿಕ ವಿವರಗಳೊಂದಿಗೇ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಸಿದ್ಧಿಸಿದೆ. ವಿಮರ್ಶಾಪರವಾದ ಒಲವಿದ್ದೂ ಅನ್ಯ ದೇಶೀಯರನ್ನು ಮನುಷ್ಯರನ್ನಾಗಿಯೇ ಕಾಣುವ ನಿಲುವು ಇಲ್ಲಿದೆ. ಅಂತೆಯೇ ಇದು ಬರಿಯ ಪ್ರವಾಸ ಕಥನವಲ್ಲ, ಸಂಸ್ಕೃತಿಯ ಸಹಾನುಭೂತಿ ಪರವಾದ ಅಧ್ಯಯನ.


ಈ ಕೃತಿಯ ಶೈಲಿಯೂ ಪ್ರವಾಸಸಾಹಿತ್ಯದ ಉದ್ದೇಶಕ್ಕೇ ಸೂಕ್ತವಾದದ್ದು. ದೀರ್ಘಕಾಲದ ಲೇಖನಾಭ್ಯಾಸದಿಂದ ಹದಗೊಂಡ ಅತಿ ಭಾರವೂ, ಹಗುರವೂ ಅಲ್ಲದ ಸುವರ್ಣಮಾಧ್ಯಮ ಶೈಲಿ. ಆದುದರಿಂದ ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿವೆ. ಇದರಿಂದ ಹಗುರವಾಗಿದ್ದೂ ಅರಿವನ್ನು ಎತ್ತರಿಸುವ, ಗಹನವಾದ ವಿಷಯವಿದ್ದೂ ರುಚಿ ಹಿಡಿಸುವ, ವಿಶ್ಲೇಷಣೆ ನಡೆಸಿಯೂ ರಸಸ್ಯಂದಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ. ನಮಗೆ ಇಂತಹ ಆರೋಗ್ಯಪೂರ್ಣ ಬರಹ- ಅಧ್ಯಯನಗಳ ಅಗತ್ಯ ತುಂಬ ಇದೆ.


ಎಂ.ಸಿ ಪ್ರಕಾಶ್

Share

Secure Payments

Shipping in India

Great Value & Quality
Create your own online store for free.
Sign Up Now