Homeಬೊಂಬಾಟ್ ಭೋಜನ
ಬೊಂಬಾಟ್ ಭೋಜನ
ಬೊಂಬಾಟ್ ಭೋಜನ
Standard shipping in 4 working days

ಬೊಂಬಾಟ್ ಭೋಜನ

 
₹300
Product Description

ಇಂಗು, ತೆಂಗು ಮತ್ತು ಚಂದ್ರು


'ತಂತಿ ಕಿತ್ತು ಹೋಯಿತು ಅಂತ ತಂಬೂರಿ ಎಸೆಯಬಾರದು'

ದಾಸರ ಕಾಲದ ಗಾದೆ ಇದು, 'ಅಡಿಗೆ ಕಡ್ಡು ಅಂತ ನಾಯಿಗೆ ಹಾಕಬಾರದು', ಈ ಕಾಲದ ಗಾದೆ, ಇಲ್ಲಿ ಎರಡು ರೀತಿಯ ಅಪಾಯಗಳಿವೆ. ಆಹಾರ ಪೋಲು ಮಾಡುವುದನ್ನು ಕಂಡ ನೆರೆಹೊರೆ. ನಮ್ಮ ಬಗ್ಗೆ ಸಿಟಾಗಬಹುದು. ಕೆಟ್ಟ ಅಡಿಗೆ ತಿಂದ ನಾಯಿ ತಿರುಗಿ ಬೀಳಬಹುದು.


'ಇಂಗು, ತೆಂಗು ಇದ್ದರೆ ಮಂಗ ಕೂಡ ಅಡಿಗೆ ಮಾಡುತ್ತೆ' ಎಂಬುದು ನಮ್ಮಜ್ಜಿ ಕಾಲದ ಮಾತು. ಆದರೆ ಆ ಮಂಗನಿಗೆ ಅಡಿಗೆಯಲ್ಲಿರುವ ವೈವಿಧ್ಯವೇನು ಗೊತ್ತು ? ಸಾಮಾನ್ಯ ನಟಿಗೆ ಮೇಕಪ್ ಮಾಡಿದಾಗ ಅತಿ ಸುಂದರವಾಗಿ ಕಾಣುತ್ತಾಳೆ. ಅಡಿಗೆಯೂ ಹಾಗೇ ! ಆಹಾರ ತಯಾರಿಸುವುದಕ್ಕಿಂತ ಅದನ್ನು Presentable Style ನಲ್ಲಿ ಪ್ರಸ್ತುತ ಪಡಿಸಬೇಕು. ಇದು ಚಂದ್ರು ಕಲಿಸಿರುವ ಪಾಟ, ಶುಚಿ, ರುಚಿ, ಸೌಂದರ್ಯಕ್ಕೆ ಇಲ್ಲಿ ಆದ್ಯತೆ.


ರಾಜ್ಯೋತ್ಸವದ ದಿನ ಸ್ಟಾರ್ ಸುವರ್ಣ 'ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಸೆಲಬ್ರಿಟಿಯಾಗಿ ನನ್ನನ್ನು ಕರೆಸಿದ್ದರು. ನಿಮಗೇನು ಮಾಡಿ ಕೊಡಲಿ" ಎಂದು ಅಡಿಗೆಗಳ ಪಟ್ಟಿಯನ್ನೇ ಕೊಟ್ಟರು. ಆಲೂ ಜಿಂಜರ್ ಪ್ರೈಡ್‌ರೈಸ್, ಟೂಟಿಫ್ರೂಟಿ ಬರ್ಫಿ, ಪನ್ನೀರ್‌ ಕ್ಯಾಪ್ಸಿಕಂ ಕರಾಮತ್ ಎಂದು ಗಾಬರಿ ಹುಟ್ಟಿಸುವ ವೆರೈಟಿ ತಿಂಡಿಗಳು ಹೇಳಿದರು.

'ಶುಗರ್ ಲೆವೆಲ್ ಕಮ್ಮಿ ಮಾಡೋ ರಾಗಿಮುದ್ದೆ. ಅವರೇಕಾಳು ಹುಳಿ ಮಾಡಿ ಸಾಕು' ಎಂದೆ. ಇಲ್ಲೂ ನನಗೆ ಆಶ್ಚರ್ಯ ಕಾದಿತ್ತು.


ಅನಾದಿಕಾಲದಿಂದ ನಾವು ಮಾಡುತ್ತಿರುವ ರಾಗಿಮುದ್ದೆಗೆ ಹೊಸ ರುಚಿ ನೀಡಿದರು. ಹಿಟ್ಟು ಅದೇ, ನೀರು ಅದೇ. ಮಾಡುವ ವಿಧಾನ ಮಾತ್ರ ಬೇರೆ ಇದೆ !' ಅವರ ತಯಾರಿಕಾ ಶೈಲಿಗೆ ನಾನು ಮಾರುಹೋದೆ, ಹಿಟ್ ಮೆ ಅವರೇಕಾಳ್' ಹುಳಿಯಂತೂ ಕಳಸಪ್ರಾಯವಾಗಿತ್ತು.


ಇದಕ್ಕೆ ಕೈರುಚಿ ಎನ್ನುತ್ತಾರೆ. ಪಿಟೀಲು ಕೊಟ್ಟರೆ ಎಲ್ಲರಿಂದ ಸಂಗೀತ ಬಾರಿಸಲಾಗುವುದಿಲ್ಲ. ದವಸಧಾನ್ಯ ಕೊಟ್ಟರೆ ಎಲ್ಲರಿಂದ ರುಚಿಯಾದ ಅಡಿಗೆ ತಯಾರಿಸಲು ಸಾಧ್ಯವಿಲ್ಲ. ಅಡಿಗೆ ಯಾರಾದರೂ ರೆಡಿ ಮಾಡಿ ಕೊಟ್ಟರೆ ಬಾರಿಸಬಹುದಷ್ಟೆ, 'ಈಟಿಂಗ್'ಗೆ 'ಬ್ಯಾಟಿಂಗ್' ಎಂಬ ಹೊಸ ಹೆಸರು ಸಹ ಬಂದಿದೆ.


ನಮಗೆ ತಿಳಿದಿರುವ ತಿಂಡಿಯನ್ನೇ ಹೊಸ ರೀತಿಯಲ್ಲಿ ಚಂದ್ರು ತಯಾರಿಸಿ ಬೆರಗುಗೊಳಿಸುತ್ತಾರೆ. ರುಚಿಯಂತೂ ಸೂಪರ್ ! ಅವರು ಕೊಡುವ ಹೆಸರುಗಳೂ ಆಕರ್ಷಕ | 'ಸೋರೆಸುಂದರಿ', 'ಕುಚಿಕುಚಿ ಕೂಟು' 'ಟಿಮಕ್ ಟಿಮಕ್ ಟಮಾಟರ್‌ ಶೊರ್ಬ' ಹೆಸರುಗಳು ಕೇಳುತ್ತಿರುವಂತೆಯೇ ಹಸಿವಿನ ಗ್ಲ್ಯಾಂಡುಗಳು ಜಾಗೃತವಾಗಿ ತಿನ್ನಲು ಪ್ರೇರಣೆ ನೀಡುತ್ತವೆ.


ಡಾ.ಗೌರಿಯಮ್ಮ ಅವರ ಸಾಂಪ್ರದಾಯಿಕ ಅಡಿಗೆ, ಆರೋಗ್ಯಕರ ಟಿಪ್ಸ್ ಈ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಗಿಡಮೂಲಿಕೆಗಳಿಂದ, ಅಡಿಗೆ ಮನೆಯಲ್ಲಿ ಲಭ್ಯವಿರುವ ಧನಿಯಾ, ಮೆಣಸು, ಶುಂಠಿ, ಜೀರಿಗೆ, ಅರಿಶಿನ ಮೊದಲಾದವುಗಳಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂಬುದರ ಬಗ್ಗೆ ಇಲ್ಲಿ ಸಲಹೆ ಮಾರ್ಗದರ್ಶನಗಳಿವೆ.


ಮೂರು ದಶಕಗಳ ಹಿಂದೆ ದೂರದರ್ಶನ ಇನ್ನೂ 'ಕಪ್ಪು, ಬಿಳುಪು' ಸ್ಥಿತಿಯಲ್ಲಿದ್ದಾಗಲೇ ಚಂದ್ರು ಹೊಸ ಅಡಿಗೆಗಳನ್ನು ವೀಕ್ಷಕರಿಗೆ ಕಲಿಸಿದವರು. ಅಡಿಗೆಯ ರಂಗದಲ್ಲಿ ಚಂದ್ರು ನಡೆಸುತ್ತಿರುವ ನಿರಂತರ ಪ್ರಯೋಗಗಳು ಹೊಸರುಚಿಗಳನ್ನು ಹುಟ್ಟು ಹಾಕುತ್ತಿವೆ. ಅವುಗಳನ್ನು ಮನೆಯಲ್ಲಿ ನಾವು ತಯಾರಿಸಲು ಸರಳವಾದ ರೆಸಿಪಿಗಳು ನೀಡಿದ್ದಾರೆ. ಈ ಪುಸ್ತಕ ಬಹಳ ಉಪಯುಕ್ತ. ಹಿಂದಿನ ಕೃತಿಗಳಂತೆ ಇದೂ ನನ್ನ ಅತ್ಯಂತ ಜನಪ್ರಿಯ ಆಗುವುದರಲ್ಲಿ ಸಂದೇಹವಿಲ್ಲ.


ಎಂ.ಎಸ್. ನರಸಿಂಹಮೂರ್ತಿ


ನಗೆ ಬರಹಗಾರರು

Share

Secure Payments

Shipping in India

Great Value & Quality
Create your own online store for free.
Sign Up Now