Homeಬಂಡಲ್ ಕಥೆಗಳು
ಬಂಡಲ್ ಕಥೆಗಳು
ಬಂಡಲ್ ಕಥೆಗಳು
Standard shipping in 4 working days

ಬಂಡಲ್ ಕಥೆಗಳು

₹140
₹126
Saving ₹14
10% off
Product Description

ಹೂವುಗಳೇ ಸೇರಿಕೊಂಡು ಈ ಮನುಷ್ಯ ಜೀವಿಗಳ ಬಗ್ಗೆ ಮಾತಾಡಿಕೊಂಡರೆ ಹೇಗಿರುತ್ತದೆ, ಹಾಗಿದೆ ಈ ಕಿರುಗತೆ ಪ್ರಫುಲ್ಲವಾದ ಭಂಗುರತೆಯೊಂದು ಪರಿಮಳ ತುಂಬಿಕೊಂಡು ಓಡಾಡಿದಂತೆ, ಒಂದು ನಿಶ್ಯಬ್ದ ಮನೆ, ನಿರ್ಜನ ಅಂಗಳ, ಮೂಕ ಹೂ ಮರ, ಗೇಟು, ಕಿಟಕಿ, ಗೇಟಿನಾಚೆ ಒಂದು ಲೋಹ, ಈಚಿ ಒಂದು ಕಬ್ಬಲಿತನದ ದೈನಿಕ. ಎರಡರ ನಡುವೆ ತಂಗಾಳಿಯಂತೆ ಸುಳಿದಾಡುತ್ತ ಇಹದ ಪರಿಮಳದ ದಾರಿಯನ್ನು ಹೊಳೆಸುವ ಸೂಕ್ಷ್ಮಕಥನ, ನಮ್ಮ ನಮ್ಮ ನಿತ್ಯದಲ್ಲೇ ನಮ್ಮನ್ನು ಒರೆಗೆ ಹಚ್ಚಬಲ್ಲ ಸರಳ ಸಹಜ D ನಿಗೂಢತೆಯೊಂದು ಇದೆ. ಇಲ್ಲೇ ಇದೆ. ಅದು ಕರೆದಾಗೆ ನಾವು ಕೇಳಿಸಿಕೊಳ್ಳಬೇಕು ಅಷ್ಟೇ! ಮತ್ತು ಅದನ್ನು ಆಲಿಸಲು ಮೊದಲು ಬೇಕಾದದ್ದು ನಮ್ಮೊಳಗಿನ ನಿಶ್ಯಬ್ದ...ಎಂಬುದು ಈ ಕಥೆಯ ಧ್ವನಿ. ಪ್ರತಿ ಜೀವಿಯೂ ಒಂದು ಪಯಣದಲ್ಲಿರುತ್ತಾಳೆ/ನೆ, ಈ ಭಿನ್ನ ಪಯಣದ ರೇಖೆಗಳು ಭಕ್ಕಂತ ಅಲ್ಲಲ್ಲಿ ಪರಸ್ಪರ ಸಂಧಿಸುವುದುಂಟು...ನೋಟವನ್ನೇ ತಿದ್ದುವಂತೆ, ಅಂತಃಕರಣವನ್ನು ಅರಳಿಸುವಂತೆ, ಅಂಥ ಸಂಧಿಸಮಯವೊಂದನ್ನು ಹೌದೋ ಅಲ್ಲವೋ ಎಂಬಂತೆ ಸ್ಪರ್ಶಿಸುವ ಯತ್ನ ಈ ಬರವಣಿಗೆಯದು. ಒಂದು ಉಸಿರನ್ನು ಎತ್ತಿ ಹಾಕಿ ಮತ್ತೆ ಕಾಯುತ್ತ ಕೂತರು' - ಇಂಥ ತಮ್ಮದೇ ಅಪ್ಪಟ ಒಕ್ಕಣಿಕೆಯ ಸುರೇಂದ್ರನಾಥ್, ಈ ಕಥೆಯ ಜೀವಾಳವೇ ಆಗಿರುವ ನೀರವವೊಂದು ನಮಗೆ ಕೇಳಿಸುವಂತೆ ಬರೆದಿದ್ದಾರೆ. ಪರಿಮಳವನ್ನು ಹೀರಲು ಮೂಗು ಸಾಕು, ಮೂಗುತಿ ಬೇಕಿಲ್ಲ, ಅಂಥ ಪ್ರಾಂಜಲ ಉಸಿರಾಟವನ್ನು ಈ ಕಥೆ ನನಗೆ ರವಾನಿಸಿದೆ. ಜಯಂತ ಕಾಯ್ಕಿಣಿ ('ಹೂ ಮರದ ಮನೆ' ಕತೆಯ ಕುರಿತು)

Share

Secure Payments

Shipping in India

Great Value & Quality
Create your own online store for free.
Sign Up Now