Homeಆತ್ಮದರ್ಶನ
ಆತ್ಮದರ್ಶನ
ಆತ್ಮದರ್ಶನ
Standard shipping in 4 working days

ಆತ್ಮದರ್ಶನ

₹180
₹162
Saving ₹18
10% off
Product Description
ಆತ್ಮ ಎಂದರೆ ಹಲವರಿಗೆ ಅರ್ಥೈಸಿಕೊಳ್ಳಲಾಗದ ಕಠಿಣವಾದ ಪದ. ಇದು ಆಧ್ಯಾತ್ಮಿಕ ಜಿಜ್ಞಾಸುಗಳಿಗೆ,ವಯಸ್ಸಾದವರಿಗೆ ಹಾಗೂ ವಿರಕ್ತರಿಗೆ ಎಂಬ ತಪ್ಪುಕಲ್ಪನೆ ಹಲವರಿಗೆ. ಹಾಗಾಗಿ ಅಂತರಾತ್ಮವನ್ನು ಮರೆತು ಶರೀರವನ್ನೇ ಮುಖ್ಯವೆಂದು ತಿಳಿದು ವ್ಯವಹರಿಸುತ್ತೇವೆ. ಸ್ಥೂಲ ಶರೀರಕ್ಕೆ ಸಾವಿದೆ. ಸೂಕ್ಷ್ಮ ಶರೀರವಾಗಿರುವ ಆತ್ಮಕ್ಕೆ ಸಾವಿಲ್ಲ. ಅದು ನಿರ್ಗುಣ, ನಿರಾಕಾರ, ಸ್ಥಿರ,ಸನಾತನ, ನಿತ್ಯ ಸತ್ಯವಾಗಿದೆ. ಈ ಶರೀರ, ಶರೀರದಲ್ಲಿರುವ ಪಂಚೇಂದ್ರಿಯ, ಕರ್ಮೇಂದ್ರಿಯ, ಪಂಚಪ್ರಾಣ, ಉಪ ಪ್ರಾಣಗಳ ಒಡೆಯ ಆತ್ಮನಾಗಿದ್ದರೆ, ಆತ್ಮದ ಒಡೆಯ ಪರಮಾತ್ಮ ನಾಗಿದ್ದಾನೆ. ಆತ್ಮದರ್ಶನ ಪುಸ್ತಕದಲ್ಲಿ ಆತ್ಮ-ಪರಮಾತ್ಮ ಪ್ರೇತಾತ್ಮ ಸಾವು, ಸಾವಿನ ನಂತರದ ಪಯಣ ಪೂರ್ವಜನ್ಮ ಪುನರ್ಜನ್ಮ. ಆತ್ಮ ಎಂದರೇನು..? ಪಂಚ ಪ್ರಾಣಗಳು ಯಾವುವು ಅವುಗಳ ಕಾರ್ಯವೇನು? ಪಂಚ ಉಪಪ್ರಾಣಗಳು ಯಾವುವು ಅವುಗಳ ಕಾರ್ಯವೇನು? ಪ್ರಭಾವಳಿ ಎಂದರೇನು? ನಕರಾತ್ಮಕವಾದ ಶಕ್ತಿ ಶರೀರದೊಳಗೆ ಹೇಗೆ ಪ್ರವೇಶಿಸುತ್ತದೆ? ಆಹಾರದಿಂದ ಮನಸ್ಸಿನ ಮೇಲೆ ಬೀರುವ ಪರಿಣಾಮಗಳು ಏನು? ಸತ್ತ ಕೂಡಲೇ ಆತ್ಮವು ಹೊರಟುಹೋಗುವುದೇ? ನರಕ ಅಥವಾ ಸ್ವರ್ಗವನ್ನು ಸೇರಿದ ಆತ್ಮವು ಪುನಃ ಯಾವ ರೂಪದಲ್ಲಿ ಕೆಳಗೆ ಬರುತ್ತದೆ? ಹಾಗೂ ಹೇಗೆ ಜನ್ಮ ತಾಳುತ್ತದೆ? ಸತ್ತ ಕೂಡಲೇ ಜನ್ಮತಾಳಲು ಸಾಧ್ಯವೇ? ಮರಣ ಹೊಂದಿದ ವ್ಯಕ್ತಿ ಮತ್ತೆ ಅದೇ ಕುಟುಂಬದಲ್ಲಿ ಜನಿಸಲು ಸಾಧ್ಯವೇ? ಮೃತ್ಯುವಿನ ಸಂದರ್ಭದಲ್ಲಿ ಆತ್ಮವು ಶರೀರದ ಯಾವ ಭಾಗದಿಂದ ಹೊರಹೋಗುತ್ತದೆ? ಪ್ರೇತಾತ್ಮ ಎಂದರೇನು? ಎಲ್ಲಿ ಸಾವನ್ನಪ್ಪಿರುತ್ತಾರೆಯೋ ಆತ್ಮವು ಅಲ್ಲಿಯೇ ನೆಲೆಸಿರುತ್ತದೆಯೆ? ಮರಣ ಹೊಂದಿದ ವ್ಯಕ್ತಿ ಮತ್ತೆ ಅದೇ ರೂಪದಲ್ಲಿ ಕಾಣಿಸಲು ಸಾಧ್ಯವೇ? ಎರಡು ಪ್ರೇತಾತ್ಮಗಳು ಮಾತನಾಡಿಕೊಳ್ಳಲು ಸಾಧ್ಯವೇ? ಪ್ರೇತಾತ್ಮಗಳು ಮೈಮೇಲೆ ಬರುತ್ತವೆ ಅನ್ನುತ್ತಾರಲ್ಲ ಸತ್ಯವೇ? ಹಾಗೆ ಬರಲು ಕಾರಣವೇನು? ಪ್ರೇತಾತ್ಮ ಶರೀರವನ್ನು ಪ್ರವೇಶಿಸಿದೆ ಎಂದು ಹೇಗೆ ತಿಳಿದುಕೊಳ್ಳುವುದು? ಸತ್ತವರು ಎಷ್ಟು ಸಮಯದ ನಂತರ ಎದ್ದು ಕುಳಿತರು ಎಂದು ಹೇಳುತ್ತಾರೆ ಅದು ಹೇಗೆ ಸಾಧ್ಯ? ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯವನ್ನು ಹೇಗೆ ಅನುಭವಿಸುತ್ತೇನೆ? ಪೂರ್ವಜನ್ಮದ ಕುರುವು ಗಳೇನಾದರೂ ಸಿಗುತ್ತವೆಯೇ? ಪತಿ-ಪತ್ನಿಯರೆ ಏಳೇಳು ಜನ್ಮಕ್ಕೂ ಪತಿ-ಪತ್ನಿ ಆಗಿರುತ್ತಾರೆ ಎಂದು ಹೇಳುತ್ತಾರಲ್ಲ ಅದು ಸತ್ಯವೇ? ಮಾನವ ಪ್ರೇತಾತ್ಮನಾಗುತ್ತಾನೆ ಅನ್ನುವುದಾದರೆ ಪ್ರಾಣಿಗಳು ಯಾಕೆ ಪ್ರೇತಾತ್ಮ ಆಗುವುದಿಲ್ಲ? ಅರಿವಿಲ್ಲದೆ ಮಾಡಿದ ತಪ್ಪಿಗೆ ಶಿಕ್ಷೆ ಇದೆಯೇ? ಶಾಪಗಳು ತಟ್ಟುತ್ತವೆಯೇ? ಮಕ್ಕಳು ಹುಟ್ಟಿದಾಗಿನಿಂದ ಒಂದು ವರ್ಷದವರೆಗೆ ಹೆಚ್ಚು ಅಳಲು ಕಾರಣವೇನು? ಮಕ್ಕಳಿಗೆ ಹುಟ್ಟಿದ ಕೂಡಲೇ ಮಾತು ಬಾರದಿರಲು ಕಾರಣವೇನು? ಸಾವಿನ ಮುನ್ಸೂಚನೆಗಳೇನು? ಅತೀಂದ್ರಿಯ ಶಕ್ತಿ ಹಾಗೂ ಅತಿಮಾನುಷ ಶಕ್ತಿಗೆ ಇರುವ ವ್ಯತ್ಯಾಸವೇನು? ಅನೇಕ ರೋಗಿಗಳನ್ನು ಗುಣಪಡಿಸಿದ ಯೋಗಿಗಳೇ ರೋಗಕ್ಕೆ ತುತ್ತಾಗಲು ಕಾರಣವೇನು? ಪರಕಾಯ ಪ್ರವೇಶವೆಂದರೇನು? ದೇವರು ಮಾನವರ ಮೈ ಮೇಲೆ ಬರಲು ಸಾಧ್ಯವೇ ? ಆತ್ಮಗಳನ್ನು ಕರೆಸಿ ಮಾತನಾಡುತ್ತೇವೆ ಹೇಳುತ್ತಾರಲ್ಲ ಸಾಧ್ಯವೇ ? ಆತ್ಮದ ಅರಿವಿಗೆ ಇರುವ ಮಾರ್ಗ ಯಾವುದು ? ಧ್ಯಾನ ಎಂದರೇನು ? ಧ್ಯಾನ ನಿರಾಕಾರವೋ? ಸಾಕಾರವೋ? ಧ್ಯಾನಕ್ಕೂ ನಾವು ಸೇವಿಸುವ ಆಹಾರಕ್ಕೆ ಸಂಬಂಧವಿದೆಯೇ? ಧ್ಯಾನ ಮಾಡುವಾಗ ಮನಸ್ಸು ಸ್ಥಿರವಾಗುವುದೇ ಇಲ್ಲ ಇದಕ್ಕೆ ಕಾರಣವೇನು? ಸಂಸಾರದಲ್ಲಿದ್ದೂ ಧ್ಯಾನ ಮಾಡಬಹುದೇ? ಹಾಗೆ ಮಾಡುವುದರಿಂದ ಧ್ಯಾನ ಸಿದ್ಧಿಸುವುದೇ? ಮೌನವೆಂದರೆ ಏನು ಇದು ಧ್ಯಾನಕ್ಕೆ ಹೇಗೆ ಸಹಾಯವಾಗುತ್ತದೆ? ಪಾದುಕೆಗಳನ್ನು ಧರಿಸುವುದಕ್ಕೂ ಧ್ಯಾನಕ್ಕೂ ಸಂಬಂಧವಿದೆಯೇ? ಆಯುಷ್ ಮುಗಿದ ಮೇಲೆ ಸಾಯಲೇಬೇಕು ಎಂದಾದರೆ ಯೋಗ ಮಾಡುವುದರಿಂದ ಆಯುಷ್ ಹೆಚ್ಚಾಗುವುದು ಎಂದು ಹೇಳುತ್ತಾರಲ್ಲ ಅದು ಹೇಗೆ? ಹೀಗೆ ಅನೇಕ ವಿಚಾರಗಳನ್ನು ಸವಿಸ್ತಾರವಾಗಿ ಆತ್ಮದರ್ಶನ ಗ್ರಂಥದಲ್ಲಿ ಕಟ್ಟಿಕೊಡಲಾಗಿದೆ. ಧನ್ಯವಾದಗಳು ವಿರೂಪಾಕ್ಷ ಬೆಳವಾಡಿ
Share

Secure Payments

Shipping in India

Great Value & Quality
Create your own online store for free.
Sign Up Now